ಸಚಿವ ಆನಂದ್‍ಸಿಂಗ್ – ಡಿಕೆಶಿ ಭೇಟಿ, ರಾಜಕೀಯ ವಲಯದಲ್ಲಿ ಸಂಚಲನ
ಬೆಂಗಳೂರು,ಜ.31- ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇಂದು ಬೆಳಗ್ಗೆ ಖಾಸಗಿ ಕಾರಿನಲ್ಲಿ ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಆಗಮಿಸಿದ ಆನಂದ್‍ಸಿಂಗ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆಸಿದರು. ಕಾಂಗ್ರೆಸಿನಿಂದ ಪಕ್ಷಾಂತರವಾದ ವಲಸಿಗ ಕಾಂಗ್ರೆಸಿಗರು ಮರಳಿ ತವರು ಪಕ್ಷದತ್ತ ಮುಖ ಮಾಡಿದ್ದಾರೆ ಎಂಬ ವದಂತಿಗಳ ನಡುವೆ ಡಿ.ಕೆ.ಶಿವಕುಮಾರ್ ಹಾಗೂ ಆನಂದ್ ಸಿಂಗ್ ಅವರ ಭೇಟಿ ಕುತೂಹಲ […]