ರಚನಾತ್ಮಕ ಹೆಜ್ಜೆಗಳ ದಿಟ್ಟ ಬಜೆಟ್ : ಅಶ್ವತ್ಥನಾರಾಯಣ ಸಂತಸ

ಬೆಂಗಳೂರು: `ಕೃಷಿ, ಉದ್ಯೋಗ ಸೃಷ್ಟಿ, ಶಿಕ್ಷಣದ ಬಲವರ್ಧನೆ ಮತ್ತು ಆರೋಗ್ಯ ಸೇವೆಗಳತ್ತ ಸಾಕಷ್ಟು ಗಮನ ಹರಿಸಿರುವ ಬಜೆಟ್ ಇದಾಗಿದೆ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೇಕಾಗುವ ರಚನಾತ್ಮಕ ಕಾರ್ಯಕ್ರಮಗಳನ್ನು ಒಳಗೊಂಡಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬಜೆಟ್ ಮಂಡನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದ ಸಮತೋಲಿತ ಅಭಿವೃದ್ಧಿಗೆ ದೂರದೃಷ್ಟಿಯುಳ್ಳ ಯೋಜನೆಗಳು ಮತ್ತು ಉಪಕ್ರಮಗಳು ಮುಖ್ಯ. ಈ ನಿಟ್ಟಿನಲ್ಲಿ ಬೊಮ್ಮಾಯಿ ಗಮನ ಹರಿಸಿರುವುದು ನಿಚ್ಚಳವಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನಿರುದ್ಯೋಗದಂತಹ […]

ಉನ್ನತ ವಿಚಾರ, ಸರಳ ಬದುಕು : ಮಾಜಿ ಪ್ರಧಾನಿ ಶಾಸ್ತ್ರಿ ದೇಶಕ್ಕೆ ಮಾದರಿ

ಬೆಂಗಳೂರು,ಜ.11- ಉನ್ನತ ವಿಚಾರ, ಸರಳ ಬದುಕು ಮತ್ತು ಉತ್ಕೃಷ್ಟ ನೈತಿಕತೆಯ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬದುಕು ದೇಶಕ್ಕೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಮರಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ದೇಶದ ರಕ್ಷಣೆಗೆ ಕಟಿಬದ್ಧರಾಗಿದ್ದ ಅವರ ಕೆಚ್ಚು ಭಾರತದ ಸಮಗ್ರತೆಯನ್ನು ಉಳಿಸುವಲ್ಲಿ ನಿರ್ಣಾಯಕ ಶಕ್ತಿಯಾಗಿದೆ ಎಂದು ಹೇಳಿದರು. ಮಹಾತ್ಮ ಗಾಂೀಧಿಜಿಯವರ ವಿಚಾರ ಮತ್ತು […]