ಪಾದಯಾತ್ರೆಯಿಂದ ಪ್ರಾಣಸಂಕಟ ತರಬೇಡಿ : ಸಚಿವ ಸಿ.ಸಿ.ಪಾಟೀಲ್‍

ಬೆಂಗಳೂರು,ಜ.11- ಜನಪರ ಯೋಜನೆಗಳ ಅನುಷ್ಠಾನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಸಹಮತದಿಂದ ಮತ್ತು ಸಂಯಮದಿಂದ ಮುಂದುವರೆಯಬೇಕು, ಇದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷವಾದ ಕಾಂಗ್ರೆಸ್ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿರುವುದು ಖಂಡನೀಯ. ಇದರಿಂದ ಮುಂದೆನಾದರೂ ಕೋವಿಡ್ ಮತ್ತಷ್ಟು ವ್ಯಾಪಿಸಿದರೆ ಇದಕ್ಕೆ ಕಾಂಗ್ರೆಸ್ಸೇ ಹೊಣೆಯಾಗಿ ಜನರ ಶಾಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‍ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶವೇ ಈಗ ಕೋವಿಡ್ ನ […]