ಕಾಂಗ್ರೆಸ್’ನ ಮೇಕೆದಾಟು ಕರ್ಮಕಾಂಡ ನಮ್ಮ ಬಳಿ ಇದೆ: ಗೋವಿಂದ ಕಾರಜೋಳ

ಬೆಂಗಳೂರು,ಜ.1- ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಎಷ್ಟು ಬೇಜಾವಬ್ದಾರಿಯಾಗಿ ನಡೆದುಕೊಂಡಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ದಾಖಲೆಗಳ ಸಮೇತ ಬಿಚ್ಚಿಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆಸಲಿರುವ ಪಾದಯಾತ್ರೆ ಪ್ರಾರಂಭವಾಗುವ ಒಂದೆರಡು ದಿನ ಮುನ್ನವೇ ಮಾಧ್ಯಮಗೋಷ್ಠಿ ಕರೆದು ಕಾಂಗ್ರೆಸ್ನವರ ಹೊಣಗೇಡಿತನವನ್ನು ಬಯಲು ಮಾಡುತ್ತೇನೆ. ಅಲ್ಲಿಯ ತನಕ ಮಾಧ್ಯಮದವು ಕಾಯಿರಿ ಎಂದು ಸೂಚ್ಯವಾಗಿ ಹೇಳೀದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ […]