ಜನೌಷಧಿ ಕೇಂದ್ರಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಬೇಕು : ಸಚಿವ ಸುಧಾಕರ್

ತುಮಕೂರು, ನ.17- ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಕಡ್ಡಾಯವಾಗಿ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಸಿಹೆಚ್‍ಸಿ ಮತ್ತು ಪಿಹೆಚ್‍ಸಿಗಳಿಗೂ ಸಹ ಜನೌಷ ಕೇಂದ್ರ ವಿಸ್ತರಣೆಯಾಗುವ ರೀತಿ ವೈದ್ಯರುಗಳು ಒತ್ತು ನೀಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಔಷಗಳು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಔಷಧಿ ಕೊರತೆಗೆ ಸಂಬಂಸಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಇ-ಮೇಲ್ ಅಥವಾ ದೂರವಾಣಿ ಮೂಲಕ ತಿಳಿಸಬೇಕು. ಸ್ಥಳೀಯವಾಗಿಯೂ ಸಹ ಔಷಗಳನ್ನು ಖರೀದಿಸಬಹುದು. […]