ಕಾಂಗ್ರೆಸ್‍ನತ್ತ ಸಚಿವ ಮಾಧುಸ್ವಾಮಿ ಚಿತ್ತ

ಬೆಂಗಳೂರು,ಆ.20- ಸರ್ಕಾರ ನಡೆಯುತ್ತಿಲ್ಲ ತಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡಿ ವಿವಾದದ ಅಲೆ ಎಬ್ಬಿಸಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆಯೇ ಎಂಬ ಚರ್ಚೆಗಳು ಹರಿದಾಡಲಾರಂಭಿಸಿವೆ. ಸಾಮಾಜಿಕ ಕಾರ್ಯಕರ್ತರೊಬ್ಬರ ಜೊತೆ ಮಾತನಾಡುವ ಸಂದರ್ಭದಲ್ಲಿ ಮಾಧುಸ್ವಾಮಿ ನೀಡಿರುವ ಹೇಳಿಕೆಗಳು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಂಪುಟದಲ್ಲಿ ಬಹಳಷ್ಟು ಸಚಿವರು ಮಾಧುಸ್ವಾಮಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರ ಹೇಳಿಕೆಯಲ್ಲಿ ವಿಪರೀತ ಅರ್ಥ ಹುಡುಕುವುದು ಬೇಡ ಎಂದು ಸಮರ್ಥನೆ ನೀಡಿದ್ದರು.ಇದೆಲ್ಲದರ ಬಳಿಕವೂ ಮಾಧುಸ್ವಾಮಿ ನನ್ನ ಹೇಳಿಕೆ ನಿಜ […]

“ಮಾಧುಸ್ವಾಮಿ ಕಿಮ್ ಜಾಂಗ್‍ ಉನ್ ಇದ್ದಂತೆ, ನಮ್ಮ ಜಿಲ್ಲೆ ಹಾಳುಮಾಡಿಬಿಟ್ಟ”

ತುಮಕೂರು,ಜ.6- ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ದಕ್ಷಿಣ ಕೊರಿಯಾದ ಸರ್ವಾಕಾರಿ ಕಿಂಮ್‍ಜಾಂಗ್‍ಉನ್ ಇದ್ದಂತೆ. ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಒಂದು ಸ್ಥಾನವೂ ಬರುವುದಿಲ್ಲ…. ಹೀಗೆಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ನಡುವಿನ ಮುಸುಕಿನ ಗುದ್ದಾಟ ಬೆಳಕಿಗೆ ಬಂದಿದೆ. ತುಮಕೂರಿನಲ್ಲಿಂದು ನಗರಾಭಿವೃದ್ಧಿ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ, ಸ್ಮಾರ್ಟ್ ಸಿಟಿ ಯೋಜನೆಯಡಿ […]