ಪಂಚಮಶಾಲಿ ಮೂರನೆ ಪೀಠ ಸ್ಥಾಪನೆ: ಸಮರ್ಥಿಸಿಕೊಂಡ ಸಚಿವ ನಿರಾಣಿ

ಮೈಸೂರು, ಫೆ.4- ರಾಜ್ಯದಲ್ಲಿ ಪಂಚಮಶಾಲಿ ಮೂರನೇ ಪೀಠ ಸ್ಥಾಪನೆಯನ್ನು ಸಚಿವ ಮುರುಗೇಶ್ ನಿರಾಣಿ ಸಮರ್ಥಿಸಿಕೊಂಡರು. ನಗರದಲ್ಲಿಂದು ಮಾತನಾಡಿದ ಅವರು, ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ. ಆದರೆ ಈ ಪೀಠದ ಸ್ಥಾಪನೆ ಹಿಂದೆ ನಾನಿಲ್ಲ. ಆದರೆ ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಇದರ ಬೆಂಬಲಕ್ಕೆ ಇದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ ಎಂದರು. ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ ಮೂರನೇ ಪೀಠ […]