ಸುಟ್ಟು ಹೋದ ಟಿಸಿ 24 ಗಂಟೆಗಳಲ್ಲಿ ಬದಲಾವಣೆ

ಬೆಂಗಳೂರು,ಮಾ.7- ಕೃಷಿ ಪಂಪ್‍ಸೆಟ್ ಗಳಿಗೆ ಅಳವಡಿಸಿರುವ ಟಿಸಿಗಳು ಸುಟ್ಟು ಹೋದಾಗ ಅದನ್ನು ಬದಲಿಸುವ ಕಾರ್ಯವನ್ನು 24 ಗಂಟೆಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು. ಪ್ರಶ್ನೋತ್ತರ ಅವಯಲ್ಲಿ ಸದಸ್ಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತಿರಿಸಿದ ಸಚಿವರು, ಹೊಸ ಟಿಸಿ ಹಾಕುವಲ್ಲಿ ಸ್ವಲ್ಪ ವಿಳಂಬ ವಾಗುತ್ತಿರ ಬಹುದು.ಆದರೆ, ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು. ಟಿಸಿ ಅಳವಡಿಸುವ ಕೆಲಸವನ್ನು ಖಾಸಾಗಿಯವರಿಗೆ ವಹಿಸಲು ಸಾಧ್ಯವಿಲ್ಲ ಎಂದ ಅವರು, ಇದನ್ನು […]