ಚರ್ಚೆ ವೇಳೆ ಸಚಿವರು, ಅಧಿಕಾರಿಗಳು ಹಾಜರಿಲ್ಲ : ಜೆಡಿಎಸ್ ಶಾಸಕರ ಆಕ್ಷೇಪ

ಬೆಂಗಳೂರು,ಮಾ.9- ಅಯವ್ಯಯದ ಮೇಲೆ ಚರ್ಚೆ ನಡೆಯುವಾಗ ಸಚಿವರು, ಅಧಿಕಾರಿಗಳು ಹಾಜರಿಲ್ಲ. ಈ ರೀತಿಯಾದರೆ ಸದನ ಏಕೆ ನಡೆಸಬೇಕು ಎಂದು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿಂದು ಆಕ್ಷೇಪಿಸಿದರು. 2022-23ನೇ ಸಾಲಿನ ಆಯವ್ಯಯದ ಚರ್ಚೆ ಆರಂಭಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅವಕಾಶ ನೀಡಿದರು. ಕುಮಾರಸ್ವಾಮಿ ಮಾತನಾಡಲು ಎದ್ದು ನಿಂತಾಗ ಸಚಿವರು ಹಾಗೂ ಅಧಿಕಾರಿಗಳ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಸಚಿವರು ಇಲ್ಲ , ಅಧಿಕಾರಿಗಳೂ ಇಲ್ಲ. ನಾವು ಮಾತನಾಡುವುದು […]