ನೀರೀನ ದುರ್ಬಳಕೆ ತಪ್ಪಿಸಲು ನೂತನ ಜಲ ನೀತಿ

ಬೆಂಗಳೂರು,ಆ.21- ರಾಜ್ಯದ ನೀರಿನ ಬವಣೆ ನೀಗಿಸಲು ಮತ್ತು ಸಂರಕ್ಷಿಸಲು ಅನಗತ್ಯವಾಗಿ ನೀರನ್ನು ದುರ್ಬಳಕೆ ಮಾಡುವವರಿಗೆ ದಂಡ ವಿಧಿಸುವ ಅವಕಾಶವನ್ನು ನೂತನ ಜಲನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಆ.12ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 2022ರ ಕರ್ನಾಟಕ ಜಲನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ನೆರೆಯಿಂದ ಸೃಷ್ಟಿಯಾಗುವ ಪ್ರವಾಹದ ನೀರನ್ನು ಸಂರಕ್ಷಿಸಿ ಬಳಕೆ ಮಾಡಿಕೊಳ್ಳುವ ಪ್ರಸ್ತಾವಿತ ಯೋಜನೆಗಳನ್ನು ಒಳಗೊಂಡಂತೆ ನೂತನ ಜಲನೀತಿಗೆ ಅಂಗೀಕಾರ ನೀಡಲಾಗಿದೆ. ಈ ನೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ವಾರ್ಷಿಕ 1072 ಕ್ಯೂಬಿಕ್ ಮೀಟರ್ ನೀರು ಸರಬರಾಜು ಮಾಡುವ […]