ದೇಶಪಾಂಡೆ ಅಜಾತ ಶತ್ರು : ಸಿದ್ದರಾಮಯ್ಯ ಬಣ್ಣನೆ

ಬೆಳಗಾವಿ, ಡಿ.28- ಅಜಾತಶತ್ರು ಹಾಗೂ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಿರಿಯ ಶಾಸಕ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸ್ತುತ್ಯಾರ್ಹವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿಧಾನಸಭೆಗೆ ತಿಳಿಸಿದರು. ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸ್ನೇಹಜೀವಿಯಾದ ದೇಶಪಾಂಡೆ ಎಲ್ಲ ರಾಜಕಾರಣಿಗಳೊಂದಿಗೆ ಅತ್ಯಂತ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಶ್ರಮಜೀವಿಯಾಗಿರುವ ಅವರು, ತಮಗೆ ವಹಿಸುವ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಛಾತಿ ರೂಢಿಸಿಕೊಂಡಿದ್ದಾರೆ […]