ರಾಜೀನಾಮೆ ನೀಡಿದ ಶಿಕ್ಷಕಿ ಮನೆಗೆ ಸುರೇಶ್ ಕುಮಾರ್ ಭೇಟಿ,  ಸಾಂತ್ವನ

ಬೆಂಗಳೂರು, ಜ.16- ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ‌ ಮಾಡುತ್ತಿದ್ದ ಯುವತಿಯೊಬ್ಬರನ್ನು ಆಕೆಯದಲ್ಲದ ತಪ್ಪಿಗೆ ಕೋಮು ವಿವಾದಕ್ಕೆ ಎಳೆದು ಸುಖಾಸುಮ್ಮನೆ ಆರೋಪಿಸಿ ಅನಗತ್ಯ ಗೊಂದಲ ಎಬ್ಬಿಸಿದ ಕಾರಣ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಆಕೆಯ ಮನೆಗೆ ನೆನ್ನೆ ತಡರಾತ್ರಿ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸಾಂತ್ವನಿಸಿ ಧೈರ್ಯ ತುಂಬಿದ್ದಾರೆ. ಕೆಳಮಧ್ಯಮ ಕುಟುಂಬದ, ಮನೆಯ ಆಧಾರ ಸ್ಥಂಭವಾದ ಯುವತಿ ಹೊಂದಿದ್ದ ಭವಿಷ್ಯದ ಕುರಿತಾದ ಆತಂಕ, ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ‌ ಪರಿಣಾಮಗಳ ಬಗೆಗಿನ‌ ಭಯದ ಕುರಿತು ಆಕೆಗೆ […]