ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿಲ್ಲ ಉತ್ತರ ಕರ್ನಾಟಕ ಮೂವರು ಶಾಸಕರ ಹೆಸರು

ಬೆಂಗಳೂರು,ಮಾ.25- ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಭಾಗಶಃ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಹಾಲಿ ಮೂವರ ಕ್ಷೇತ್ರಗಳಿಗೆ ಟಿಕೆಟ್ ಪ್ರಕಟಿಸದೆ ಕುತೂಹಲ ಕೆರಳಿಸಿದೆ. ಅಫ್ಜಲ್‍ಪುರದ ಎಂ.ವೈ.ಪಾಟೀಲ್, ಕುಂದಗೋಳದ ಕುಸುಮಾಶಿವಳ್ಳಿ, ಲಿಂಗಸೂರು ಕ್ಷೇತ್ರದ ಡಿ.ಎಸ್. ಹೋಳಗೇರಿ ಅವರ ಹೆಸರು ಪ್ರಕಟವಾಗಿಲ್ಲ. ಬೆಂಗಳೂರು ಹೊರತು ಪಡಿಸಿ ರಾಜ್ಯದಲ್ಲೇ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಒಬ್ಬತ್ತು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಚಿಕ್ಕೊಡಿ-ಸದಲಗ, ಕಾಗವಾಡ, ಕುಡಚಿ, ಹುಕ್ಕೇರಿ, ಯಮಕನಮರಡಿ, ಬೆಳಗಾವಿ ಗ್ರಾಮೀಣ, ಖಾನಾಪುರ, ಬೈಲಹೊಂಗಲ, ರಾಮದುರ್ಗ […]

ಬಿಜೆಪಿ ಟಿಕೆಟ್ ವಿಚಾರ : ಹಳಬರಿಗೆ ಕೋಕ್, RSS ನಿಷ್ಠರಿಗೆ ಲಕ್

ಬೆಂಗಳೂರು,ಮಾ.8- ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯ 6 ಮಂದಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲು ಚಿಂತನಮಂಥನ ನಡೆದಿದೆ. ಕೊನೆ ಚುನಾವಣೆಯ ಹೊಸ್ತಿಲಿನಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವಪ್ಪ (ಶಿವಮೊಗ್ಗ), ಶಾಸಕರಾದ ಎಂ.ಪಿ.ಕುಮಾರಸ್ವಾಮಿ(ಮೂಡಿಗೆರೆ), ಬಸವರಾಜ ದಡೆಸೂರು(ಕನಕಗಿರಿ), ನೆಹರು ಓಲೇಕಾರ್(ಹಾವೇರಿ), ಮಾಡಾಳ್ ವಿರೂಪಾಕ್ಷಪ್ಪ(ಚನ್ನಗಿರಿ) ಹಾಗೂ ಕೆ.ಸಿ.ನಾರಾಯಣಗೌಡ(ಕೆ.ಆರ್.ಪೇಟೆ) ಅವರುಗಳಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಈಗಾಗಲೇ ಬಿಜೆಪಿಯು ದೆಹಲಿ ಮೂಲದ ಖಾಸಗಿ ಸಂಸ್ಥೆಯಿಂದ ಐದು ಬಾರಿ ಈ ಕ್ಷೇತ್ರಗಳಲ್ಲಿ ಸಮೀಕ್ಷೆ […]

ಬಿಎಸ್‍ವೈ ಮಾತಿನಿಂದ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಶುರು

ಬೆಂಗಳೂರು,ಮಾ.7-ಹಾಲಿ ಕೆಲವು ಶಾಸಕರಿಗೆ ಟಿಕೆಟ್ ಕೈ ತಪ್ಪಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದರಿಂದ ಆಕಾಂಕ್ಷಿಗಳಲ್ಲಿ ನಡುಕು ಉಂಟಾಗಿದೆ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯರು ಆಗಿರುವ ಯಡಿಯೂರಪ್ಪ ಈ ಮಾತು ಹೇಳಿರುವುದು ಇದೀಗ ಟಿಕೆಟ್ ಯಾರಿಗೆ ಕೈತಪ್ಪಲಿದೆ ಎಂಬ ಚರ್ಚೆ ಬಿಜೆಪಿ ಪಾಳೆಯದಲ್ಲಿ ಆರಂಭವಾಗಿದೆ. ಸಾಮಾನ್ಯವಾಗಿ ಯಡಿಯೂರಪ್ಪ ಮಾಹಿತಿ ಇಲ್ಲದೆ ಪ್ರಚಾರಕ್ಕಾಗಿ ಹೇಳುವಂತಹ ವ್ಯಕ್ತಿಯಲ್ಲ. ಏನೇ ಹೇಳಿದರೂ ಅದರ ಹಿಂದೆ ಸಾಕಷ್ಟು ಅಳೆದು ತೂಗಿ ಮಾಧ್ಯಮಗಳ ಮುಂದೆ ಹೇಳುವ ರಾಜಕಾರಣಿ. […]

ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಯ ಹಲವು ಶಾಸಕರು : ಡಿಕೆಶಿ ಬಾಂಬ್

ಬೆಂಗಳೂರು,ಮಾ.7- ಬಿಜೆಪಿ ತೊರೆದು ಸಾಕಷ್ಟು ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ, ಹಲವು ಮಂದಿ ಹಾಲಿ ಶಾಸಕರು ಈ ಪಟ್ಟಿಯಲ್ಲಿದ್ದಾರೆ. ಸದ್ಯಕ್ಕೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಕಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ ನಂಜುಂಡಸ್ವಾಮಿ, ವಿಜಯಪುರದ ನಾಗಠಾಣಾ ಕ್ಷೇತ್ರದ ಮಾಜಿ ಶಾಸಕ ಮನೋಹರ್ ಐನಾಪುರ, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಅವರು ಇಂದು ಬಿಜೆಪಿ […]

ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ವಲಸಿಗ ಶಾಸಕರು

ಬೆಂಗಳೂರು,ಫೆ.25- ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಸ್ಥಾನಪಲ್ಲಟ ಗಳು ತೀವ್ರಗೊಳ್ಳುತ್ತಿದ್ದು, ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಸೇರಿದ್ದ ಪ್ರಭಾವಿಗಳು ಮತ್ತೆ ಮೂಲ ಪಕ್ಷದ ಕದ ತಟ್ಟುತ್ತಿರುವ ವದ್ಧಂತಿಗಳಿವೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಮೂಹೂರ್ತ ಇಟ್ಟು ಬಾಂಬೆಯಲ್ಲಿ ಠಿಕಾಣಿ ಹೂಡಿ ಆಪರೇಷನ್ ಕಮಲ ಯಶಸ್ವಿಯಾದ ಬಳಿಕ, ಮರಳಿ ಬಂದು ಸರ್ಕಾರದಲ್ಲಿ ಸಚಿವರಾದವರ ಪೈಕಿ ಕೆಲವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತುಗೊಂದಲಕ್ಕೆ ಒಳಗಾಗಿ ಪಕ್ಷ ನಿಷ್ಠೆ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ನ 14 ಮಂದಿ, ಜೆಡಿಎಸ್‍ನ ಮೂವರು ಶಾಸಕರು ಕಳೆದ […]

ಆಡಳಿತ ವಿರೋಧಿ ಅಲೆ : ಬಿಜೆಪಿ ಶಾಸಕರಿಗೂ ಟಿಕೆಟ್ ತಪ್ಪುವ ಭೀತಿ

ಬೆಂಗಳೂರು,ಫೆ.25- ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನ ಕಳೆದಂತೆ ಕಾವು ಹೆಚ್ಚಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರಿಗೆ ಡವ ಡವ ಆರಂಭವಾಗಿದೆ. ಏಕೆಂದರೆ ಗೆದ್ದಿರುವ ಎಲ್ಲಾ ಶಾಸಕರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಕಾತರಿಯನ್ನು ಪಕ್ಷ ನೀಡಿಲ್ಲ. ಸಹಜವಾಗಿ ಇದು ಅನೇಕ ಶಾಸಕರಿಗೆ ತಳಮಳ ಉಂಟು ಮಾಡಿದ್ದು, ಎಲ್ಲಿ ಟಿಕೆಟ್ ಕೈ ತಪ್ಪಲಿದೆಯೋ ಎಂಬ ದುಗುಡ ಕಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿರುವಂತೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಉಳಿದಂತೆ 2018 ಹಾಗೂ ನಂತರ ನಡೆದ ಉಪಚುನಾವಣೆಯಲ್ಲಿ […]

ಕಾಂಗ್ರೆಸ್‍ನಲ್ಲಿ ಪಕ್ಷ ನಿಷ್ಠರ ಅಸಮಾಧಾನ

ಬೆಂಗಳೂರು,ಫೆ.20- ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ನಾಯಕರ ವಲಸೆಯ ಪ್ರಮಾಣ ಹೆಚ್ಚಾಗಲಾರಂಭಿಸಿದೆ. ಜೆಡಿಎಸ್‍ನ ನಾಲ್ಕು ಶಾಸಕರು, ಉತ್ತರಕರ್ನಾಟಕ ಭಾಗದ ಬಿಜೆಪಿಯ ಮೂವರು ಶಾಸಕರು, ಸುಮಾರು 20ಕ್ಕೂ ಹೆಚ್ಚು ಮಂದಿ ಮಾಜಿ ಶಾಸಕರು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತದಲ್ಲಿದ್ದಾಗ ಅವಡಗಚ್ಚಿಕೊಂಡಿದ್ದ ನಾಯಕರು ಅಧಿಕಾರ ಅವಧಿ ಕೊನೆಗೊಳ್ಳುತ್ತಿದ್ದಂತೆ ಪಕ್ಷ ತೊರೆಯಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್‍ಗೆ ಸಿಹಿ-ಕಹಿ ಮಿಶ್ರ ಅನುಭೂತಿಯನ್ನು ಸೃಷ್ಟಿಸಿದೆ. ಒಂದೆಡೆ ಕಾಂಗ್ರೆಸ್‍ಗೆ ಅನ್ಯ ಪಕ್ಷಗಳಿಂದ ವಲಸೆ ಹೆಚ್ಚುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆಯಾಗಿದ್ದರೆ, ಮತ್ತೊಂದೆಡೆ ವಲಸಿಗರಿಂದಾಗಿ ಮೂಲ ಕಾಂಗ್ರೆಸ್ಸಿಗರು […]

ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ ಕುರ್ಚಿಗಳು ಖಾಲಿ ಖಾಲಿ

ಬೆಂಗಳೂರು,ಫೆ.10- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವಾಗ ಪ್ರತಿಪಕ್ಷಗಳು ಹಾಜರಿರುವುದು ರೂಢಿ ಸಂಪ್ರದಾಯ, ಮೊದಲಿನಿಂದಲೂ ಇದು ಪಾಲನೆಯಾಗುತ್ತಿದೆ. ಕೆಲವು ವೇಳೆ ರಾಜಕೀಯ ಸಂಘರ್ಷಗಳು ಸಹನೆ ಮಿತಿ ಮೀರಿದ ವೇಳೆಯಲ್ಲೂ ಪ್ರತಿಪಕ್ಷಗಳು ಸದನದಲ್ಲಿ ಹಾಜರಿದ್ದು, ಆಕ್ಷೇಪಿಸುವುದು, ಪ್ರತಿಭಟಿಸುವುದು ಅಥವಾ ಬಹಿಷ್ಕರಿಸುವುದನ್ನು ಮಾಡಿವೆ. ಇದೇ ಮೊದಲ ಬಾರಿಗೆ ಶೇ.80ರಷ್ಟು ಸದಸ್ಯರು […]

ಅತ್ತ ಬಜೆಟ್‍ ಸಿದ್ಧತೆ, ಇತ್ತ ಕ್ಷೇತ್ರಾನುದಾನ ಬಳಸದ ಸೋಮಾರಿ ಶಾಸಕರು

ಬೆಂಗಳೂರು,ಜ.30- ಅತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಸಿದ್ದತೆ ನಡೆಸುತ್ತಿದ್ದರೆ ಇತ್ತ ಕ್ಷೇತ್ರ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳುವಲ್ಲಿ ಶಾಸಕರು ನಿರಾಸಕ್ತಿ ಹೊಂದಿದ್ದಾರೆ. ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಶಾಸಕರ ನಿಧಿ) ಯಡಿ ಸಿಗುವ ನಿಧಿಯು ಪ್ರತಿ ಶಾಸಕರಿಗೆ ಸಿಗುವ ಪ್ರಮುಖ ಅನುದಾನವಾಗಿದೆ. ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ವಾರ್ಷಿಕ 2 […]

ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಬಿಜೆಪಿಯ ಪ್ರಭಾವಿ ಶಾಸಕರು

ಬೆಂಗಳೂರು,ಜ.20- ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‍ನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ.ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇಂದು ಬಿಜೆಪಿ ತೊರೆಯುವುದಾಗಿ ಪ್ರಕಟಿಸಿದ್ದು, ಶೀಘ್ರವೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯ ಹಲವು ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದು, ಬೆಂಗಳೂರಿನ ಇಬ್ಬರು ಪ್ರಭಾವಿ ಶಾಸಕರು ಕೈಪಡೆ ಸೇರ್ಪಡೆಯಾಗಲು ದುಂಬಾಲು ಬಿದಿದ್ದಾರೆ. ಆಪರೇಷನ್ ಕಮಲ ನಡೆಸಿ ಜೆಡಿಎಸ್‍ನ ಮೂವರು, ಕಾಂಗ್ರೆಸ್‍ನ 14 ಮಂದಿ ಶಾಸಕರನ್ನು ಸೆಳೆದುಕೊಂಡ ಸರ್ಕಾರ ರಚಿಸಿದ್ದ ಬಿಜೆಪಿಗೆ ಚುನಾವಣೆ ಸಮೀಪಿಸುತ್ತಿರುವಂತೆ ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‍ನ ಹಲವು ಮಂದಿ ಶಾಸಕರು ಬಿಜೆಪಿ […]