“ನಿಮ್ಮನ್ನು ನಂಬಿ ಬೀದಿಗೆ ಬರುವಂತಾಯ್ತು” ಶಾಸಕಾಂಗ ಸಭೆಯಲ್ಲಿ ಆರ್.ಶಂಕರ್ ಆಕ್ರೋಶ

ಬೆಂಗಳೂರು,ಸೆ.14- ನಿಮ್ಮನ್ನು ನಂಬಿದಕ್ಕೆ ನಾನು ಬೀದಿಗೆ ಬರುವಂತಾಯಿತು. ಇನ್ನೆಂದೂ ಜೀವನದಲ್ಲಿ ಬಿಜೆಪಿಯನ್ನು ನಂಬುವುದಿಲ್ಲ. ನಂಬಲು ಕೂಡ ಇದು ಅನರ್ಹ ಪಕ್ಷ ..! ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ವಿಧಾನಪರಿಷತ್ ಸದಸ್ಯ ಆರ್.ಶಂಕರ್ ಅವರ ಆಕ್ರೋಶದ ಮಾತುಗಳಿವು. ಕಳೆದ ರಾತ್ರಿ ಖಾಸಗಿ ಹೋಟೆಲ್‍ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಅವರು ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಸಚಿವ ಸ್ಥಾನ ಇಂದು ಸಿಗುತ್ತದೆ, ನಾಳೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಆರ್.ಶಂಕರ್ ಶಾಸಕಾಂಗ ಸಭೆಯಲ್ಲಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ ಎಂದು ಗೊತ್ತಾಗಿದೆ. […]