ಆನ್‍ಲೈನ್ ಕ್ಲಾಸ್ ಎಫೆಕ್ಟ್, ಮೊಬೈಲ್ ದಾಸರಾದ ಮಕ್ಕಳು, ಪೋಷಕರು ಕಂಗಾಲು

ಬೆಂಗಳೂರು,ನ.3- ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಾಧನವಾಗಿದ್ದ ಮೊಬೈಲ್ ಫೋನ್‍ಗಳು ಇದೀಗ ಮಕ್ಕಳಿಗೆ ಪೆಡಂಭೂತವಾಗಿ ಕಾಡುತ್ತಿದೆ.ಆನ್‍ಲೈನ್ ಕ್ಲಾಸ್ ಪರಿಣಾಮದಿಂದಾಗಿ ಇಂದಿಗೂ ಮಕ್ಕಳು ಮೊಬೈಲ್ ವ್ಯಾಮೋಹದಿಂದ ಹೊರಬರಲಾಗದಂತಹ ಪರಿಸ್ಥಿತಿಗೆ ಸಿಲುಕಿಕೊಂಡಿರುವುದರಿಂದ ಅವರ ವಿದ್ಯಾಭ್ಯಾಸ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ. ಕೊರೊನಾ ನಿವಾರಣೆಯಾಗಿ ಶಾಲೆ ಶುರುವಾಗಿ ರೂಟೀನ್ ತರಗತಿಗಳು ಆರಂಭಗೊಂಡರೂ ಮಕ್ಕಳು ಮೊಬೈಲ್ ಮೋಡಿಯಿಂದ ಹೊರ ಬರಲಾಗುತ್ತಿಲ್ವಂತೆ. ಹೀಗಾಗಿ ಮಕ್ಕಳು ಓದು, ಆಟದಿಂದ ದೂರ ಉಳಿಯುತ್ತಿದ್ದಾರೆ.ಮೊಬೈಲ್ ಅಡಿಕ್ಷನ್ ಡ್ರಗ್ ಅಡಿಕ್ಷನ್‍ಗಿಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದು ಇತ್ತಿಚಿನ ಬೆಳವಣಿಗೆಗಳಿಂದ ಬಹಿರಂಗಗೊಂಡಿದೆ ಎನ್ನುತ್ತಾರೆ […]