ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿ ಅರೆಸ್ಟ್ : 7 ಮೊಬೈಲ್ ವಶ

ಬೆಂಗಳೂರು, ಮಾ.5- ಮೊಬೈಲ್‍ಗಳನ್ನು ದರೋಡೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ವಿವಿಧ ಕಂಪೆನಿಗಳ ಏಳು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕೆಟಿಎಂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ಟಿಪ್ಪು ನಗರದ 1ನೆ ಮುಖ್ಯರಸ್ತೆ ನಿವಾಸಿ ರಫೀಕ್ ಅಹಮ್ಮದ್ (24) ಬಂಧಿತ ಆರೋಪಿ. ಸಿದ್ದಯ್ಯರಸ್ತೆ, ದರ್ಗಾ ಹತ್ತಿರ ತೌಸಿಫ್ ಎಂಬುವವರು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಸ್ಯಾಮ್‍ಸಂಗ್ ಗೆಲಾಕ್ಸಿ ಮೊಬೈಲ್ ನೋಡುತ್ತಿದ್ದಾಗ ದರೋಡೆಕೋರ ಇವರ ಕೈಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಕಲಾಸಿಪಾಳ್ಯ ಠಾಣೆ […]