ಮೋಜು- ಮಸ್ತಿಗಾಗಿ ಕಳ್ಳತನಕ್ಕಿಳಿದಿದ್ದ ಇಬ್ಬರು ಅಂದರ್

ಬೆಂಗಳೂರು, ನ.26- ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನಗಳು, ಮೊಬೈಲ್, ಲ್ಯಾಪ್‍ಟಾಪ್ ಹಾಗೂ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇಬ್ಬರನ್ನು ವಿದ್ಯಾರಣ್ಯ ಪುರ ಠಾಣೆ ಪೊಲೀಸರು ಬಂಧಿಸಿ 6.87 ಲಕ್ಷ ರೂ. ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ನಿವಾಸಿಗಳಾದ ರಂಜಿತ್ ಅಲಿಯಾಸ್ ಸಂತು ಅಲಿಯಾಸ್ ಕರಿಯಾ ಅಲಿಯಾಸ್ ಪುಟ್ಟ(27) ಮತ್ತು ಅಜಿತ್(25) ಬಂಧಿತರು. ವಿದ್ಯಾರಣ್ಯ ಪುರದ ದೇಶಬಂಧು ನಗರ ನಿವಾಸಿ ಅಬ್ದುಲ್ ಖಾದರ್ ಎಂಬುವವರ ಮನೆಯಲ್ಲಿ 20 ಸಾವಿರ ಬೆಲೆಯ ವಿವೋ ಕಂಪೆನಿಯ ಮೊಬೈಲ್ 70 ಸಾವಿರ ಬೆಲೆಯ ಲ್ಯಾಪ್‍ಟಾಪ್ ಕಳ್ಳತನವಾಗಿರುವ […]

ಹಲ್ಲೆ ಮಾಡಿ ಪರಾರಿಯಾಗಿದ್ದ ದರೋಡೆಕೋರನ ಬಂಧನ

ಬೆಂಗಳೂರು, ನ.22- ಬಸ್ ಮತ್ತು ಲಾರಿಗಳ ಗಾಜು ಹೊಡೆದು ಚಾಲಕ ಮತ್ತು ಕ್ಲೀನರ್‍ಗಳಿಗೆ ಲಾಂಗ್‍ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ವರು ದರೋಡೆಕೋರರ ಪೈಕಿ ಒಬ್ಬಾತನನ್ನು ಕಾಮಾಕ್ಷಿ ಠಾಣೆ ಪೊಲೀಸರು ಬಂಧಿಸಿ, 2.35 ಲಕ್ಷ ರೂ. ಬೆಲೆಬಾಳುವ ಮೂರು ಮೊಬೈಲ್ ಹಾಗೂ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಂದ್ರಾಲೇಔಟ್ ನಿವಾಸಿ ವಿಕ್ರಂ ಅಲಿಯಾಸ್ ಸೈತಾನ್(21) ಬಂಧಿತ ಆರೋಪಿ. ಪ್ರಮುಖ ಆರೋಪಿ ವಿನಾಯಕ ಅಲಿಯಾಸ್ ಆರ್‍ಬೆಟ್ಟು ತಲೆಮರೆಸಿಕೊಂಡಿದ್ದಾನೆ. ನ.10ರಂದು ಬೆಳಗಿನ ಜಾವ 3.45ರ ಸುಮಾರಿನಲ್ಲಿ ಚೇತನ್ […]