ಪ್ರಧಾನಿ ಭದ್ರತಾಲೋಪ : ಮಲ್ಹೋತ್ರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ

ನವದೆಹಲಿ, ಜ.12- ಪ್ರಧಾನಿ ಅವರ ಭದ್ರತಾ ಲೋಪದ ಕುರಿತಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಇಂದು ಮಲ್ಹೋತ್ರ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ. ಜನವರಿ 5ರಂದು ಪ್ರಧಾನ ಮಂತ್ರಿಯವರು ಪಂಜಾಬ್‍ನ ಹುಸ್ಸೈನಿವಾಲಾದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ರ್ಯಾಲಿಯಲ್ಲಿ ಭಾಗವಹಿಸಲು ರಸ್ತೆ ಮಾರ್ಗದಲ್ಲಿ ತೆರಳಿದ್ದರು. ಈ ವೇಳೆ ರೈತರ ಪ್ರತಿಭಟನೆಯಿಂದಾಗಿ ಫಿರೋಝಪುರ್ ಮೇಲುಸೇತುವೆ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ಸಿಲುಕಿಕೊಂಡಿದ್ದರು. ಸಂಚಾರ ದಟ್ಟಣೆಯಿಂದ ಮುಂದೆ ಹೋಗಲಾದೆ ಸಿಲುಕಿಕೊಂಡಿದ್ದ ಅವರು ವಾಪಾಸ್ ಬಂದಾಗ ವಿಮಾನ […]