ಶಂಕಿತ ಉಗ್ರರಿಂದ 25 ಕಡೆ ಟ್ರಯಲ್ ಬ್ಲಾಸ್ಟ್ : NIA ಚಾರ್ಜ್‍ಶೀಟ್

ಬೆಂಗಳೂರು,ಮಾ.18- ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ತುಂಗಾ ತೀರದ ಬಳಿ ಸಂಭವಿಸಿದ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ವಿದೇಶಿ ಉಗ್ರಗಾಮಿಯ ಸಲಹೆಯಂತೆ ಶಂಕಿತ ಉಗ್ರರರು 25 ಕಡೆ ಟ್ರಯಲ್ ಬ್ಲಾಸ್ಟ್ ನಡೆಸಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿದೆ. ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಈಗ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ವಿದೇಶಿ ಉಗ್ರರ ನೆರವಿನಂತೆ ಈ ಕೃತ್ಯ ನಡೆಸಲಾಗಿದೆ ಎಂದು ಉಲ್ಲೇಖಿಸಿದೆ. ಶಂಕಿತ ಉಗ್ರರು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ […]