ಸುರತ್ಕಲ್‍ನಲ್ಲಿ ಫಾಜಿಲ್ ಮರ್ಡರ್, ನಾಲ್ವರು ಹಂತಕರು ಅರೆಸ್ಟ್

ಮಂಗಳೂರು,ಆ.2- ಸುರತ್ಕಲ್‍ನಲ್ಲಿ ನಡೆದ ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೆಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದು,ಕಾರಿನ ನಂಬರ್ ಆಧಾರದಲ್ಲಿ ಕಾರು ಮಾಲೀಕ ಅಜಿತ್‍ಕ್ರಾಸ್ತಾ ಎಂಬಾತನನ್ನು ಎರಡು ದಿನಗಳ ಹಿಂದೆ ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆತ ನೀಡಿದ ಮಾಹಿತಿ ಆಧಾರದ ಮೇರೆಗೆ ಇದೀಗ ಆರು ಮಂದಿಯನ್ನು ಬಂಧಿಸಲಾಗಿದೆ. ಕಳೆದ ಗುರುವಾರ ಸುರತ್ಕಲ್‍ನ ಬಟ್ಟೆ ಅಂಗಡಿಯೊಂದರ ಮುಂದೆ ಫಾಜಿಲ್ ನಿಂತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ […]

ಫಾಜೀಲ್ ಕೊಲೆ ಪ್ರಕರಣ, ಕಾರು ಚಾಲಕನ ಬಂಧನ

ಮಂಗಳೂರು, ಜು.31- ಸೂರತ್ಕಲ್‍ನಲ್ಲಿ ನಡೆದಿದ್ದ ಫಾಜಿಲ್ ಹತ್ಯೆಗೆ ಸಂಬಂಧಿಸಿದಂತೆ ಕಾರು ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜು.28ರ ರಾತ್ರಿ ನಡೆದಿದ್ದ ಈ ಕೊಲೆ ಪ್ರಕರಣ ಕರಾವಳಿಯಲ್ಲಿ ಭಾರಿ ಸದ್ದು ಮಾಡಿದ್ದು, ಮಂಗಳೂರಿನವನೇ ಆದ ಕಾರು ಚಾಲಕ ಅಜಿತ್‍ನನ್ನು ಬಂಧಿಸಿದ್ದು ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಮಹತ್ತ್ವದ ಬೆಳವಣಿಗೆಯಲ್ಲಿ ಹಂತಕರು ಬಂದಿದ್ದ ಕಾರನ್ನು ಪತ್ತೆ ಹಚ್ಚಿದ್ದು, ಚಾಲಕನನ್ನು ಈಗ ಬಂಧಿಸಲಾಗಿದೆ. ಪೊಲೀಸರು ಹಗಲು-ರಾತ್ರಿ ಅನ್ನದೇ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಾಕಾ ಬಂದಿ ಮಾಡಿ ಬಿಳಿ ಬಣ್ಣದ ಹೂಂಡೈ […]