ಗುಜರಾತ್ ಚುನಾವಣೆ ಮೇಲೆ ಪರಿಣಾಮ ಬೀರದ ಮೊರ್ಬಿ ಸೇತುವೆ ದುರಂತ

ಅಹಮದಾಬಾದ್,ಡಿ.8- ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ 135ಕ್ಕೂ ಜೀವಗಳನ್ನು ಬಲಿ ಪಡೆದಿದ್ದ ಮೊರ್ಬಿ ಸೇತುವೆ ದುರಂತ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ಅ.31ರಂದು ರಾತ್ರಿ ಮೊರ್ಬಿಯ ಮಚ್ಚುನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದು 135ಕ್ಕೂ ಹೆಚ್ಚು ಜನರನ್ನು ಬಲಿತ ತೆಗೆದುಕೊಂಡಿತ್ತು. ಈ ಘಟನೆ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ ಗುಜರಾತ್‍ನ ಮತದಾರರು ಇದಕ್ಕೆ ಓಗೊಡದೆ ಆಡಳಿತರೂಢ ಬಿಜೆಪಿಯನ್ನು ಸತತ 7ನೇ […]