ಬ್ರೆಜಿಲ್ : ಭಾರಿ ಮಳೆ, ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 117ಕ್ಕೆ ಏರಿಕೆ
ಪೆಟ್ರೊಪೊಲಿಸ್(ಬ್ರೆಜಿಲ್),ಫೆ.18- ಬ್ರೆಜಿಲ್‍ನ ಗುಡ್ಡಗಾಡು ನಗರ ಪೆಟ್ರೊಪೊಲಿಸ್‍ನಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ಸಾವಿಗೀಡಾದವರ ಸಂಖ್ಯೆ 117ಕ್ಕೇರಿದೆ. ಇನ್ನೂ 116 ಜನರು ನಾಪತ್ತೆಯಾಗಿರುವುದರಿಂದ ಸಾವಿನ ಸಂಖ್ಯೆ ಕ್ಷಿಪ್ರವಾಗಿ ಏರಿಕೆಯಾಗುವ ಸಂಭವ ಇದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ರಿಯೋ ಡಿ ಜನೈರೋ ನಗರದ ಮೇಲೆ ಬೆಟ್ಟದಲ್ಲಿ ನೆಲೆಗೊಂಡಿರುವ ಜರ್ಮನ್ ಪ್ರಭಾವಿತ ನಗರದಲ್ಲುಂಟಾದ ಭೂಕುಸಿತದಿಂದಾಗಿ ಮಣ್ಣಿನ ಕೆಳಗೆ ಇನ್ನಷ್ಟು ಮಂದಿ ಸಜೀವ ಸಮಾಧಿಯಾಗಿರುವ ಭೀತಿ ವ್ಯಕ್ತವಾಗಿದೆ. ರಿಯೋ ಡಿ ಜನೈರೋ ರಾಜ್ಯ ಸರ್ಕಾರವು ಏರುಗತಿಯಲ್ಲಿರುವ ಸಾವಿನ ಪ್ರಮಾಣವನ್ನು ಖಚಿತಪಡಿಸಿದೆ. ದಶಕಗಳಲ್ಲೇ […]