ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಶೀತಗಾಳಿ

ಬೆಂಗಳೂರು, ನ.11- ಉದ್ಯಾನ ನಗರಿ ಬೆಂಗಳೂರಿನಲ್ಲಿ ಶುಕ್ರವಾರ ದಿನವಿಡೀ ಸೂರ್ಯನ ದರ್ಶನವಾಗದೆ, ಮಬ್ಬು ಆವರಿಸಿಕೊಂಡಿತ್ತು.ಇದರ ನಡುವೆ ಅಲಲ್ಲಿ ಜಿಟಿ ಜಿಟಿ ಮಳೆಯೂ ಬಿತ್ತು. ಬೆಳಗಿನ ಜಾವ ಚುಮು ಚುಮು ಚಳಿಯ ಅನುಭವ ವಾದರೆ, ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿತ್ತು. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೇಟ್, ಸ್ವೇಟರ್ ಮೊರೆ ಹೋಗಿರುವುದು ಕಂಡುಬಂತು. ತಂಪು ಆವರಿಸಿದ್ದರಿಂದ ವಯೋವೃದ್ಧರು, ಅನಾರೋಗ್ಯ ದಿಂದ ಬಳಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು. ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು. […]

ಮೈ ಕೊರೆಯುವ ಚಳಿಗೆ ಬೆಂಗಳೂರು ಗಢ ಗಢ

ಬೆಂಗಳೂರು,ಅ.27-ಮೈ ಕೊರೆಯುವ ಚಳಿಗೆ ನಗರ ಗಢ ಗಢ ಎನ್ನುತ್ತಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಮೈ ಕೊರೆಯುವ ಚಳಿಯಿರುವುದರಿಂದ ಜನ ಬೆಳಗಿನ ಜಾವದ ವಾಕಿಂಗ್ ಮರೆತು ರಗ್ಗು ಹೊದ್ದು ಮಲಗುವಂತಾಗಿದೆ. ಒಂದೇರಡು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಇನ್ನು ಕೆಲ ದಿನಗಳ ಕಾಲ ಮೈ ಕೊರೆಯುವ ಚಳಿಯಲ್ಲೇ ಕಾಲ ಕಳೆಯಬೇಕಿದೆ. ನಗರದ ತಾಪಮಾನ ಕನಿಷ್ಠ 19 ರಿಂದ 20 ಡಿಗ್ರಿ ಸೆಲ್ಸಿಯಸ್‍ನಿಂದ 16 ಡಿಗ್ರಿಗೆ ಇಳಿಕೆಯಾಗಿರುವುದರಿಂದ ಬೆಳಗಿನ ಜಾವ […]