ಕೊರೊನಾಗೆ ಹೆದರಿ ವಿಷ ಸೇವಿಸಿದ ಇಡೀ ಕುಟುಂಬ, ತಾಯಿ-ಮಗು ಸಾವು

ಮಧುರೈ, ಜ. 10- ಕೊರೊನಾ ಸೋಂಕು ತಗುಲಿದೆ ಎಂಬ ಭೀತಿಯಲ್ಲಿ ವಿಷ ಸೇವಿಸಿದ ಪರಿಣಾಮ ತಾಯಿ ಹಾಗೂ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ಜ್ಯೋತಿಕಾ (29) ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ ಅಸ್ವಸ್ಥರಾಗಿರುವ ಕುಟುಂಬದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಜ್ಯೋತಿಕಾಳ ತಾಯಿ ಲಕ್ಷ್ಮಿಯ ಪತಿ ನಾಗರಾಜ್ ಎಂಬುವವರು ಇತ್ತೀಚೆಗೆ ಸಹಜ ಕಾಯಿಲೆಯಿಂದಾಗಿ ಕಳೆದ ಡಿಸೆಂಬರ್‍ನಲ್ಲಿ ಮೃತಪಟ್ಟಿದ್ದರು, ಆಗಿನಿಂದಲೂ ಕುಟುಂಬದ ನಿರ್ವಹಣೆ ತುಂಬಾ ಕಷ್ಟವಾಗಿತ್ತು, ಈ ನಡುವೆ ಮಗಳು ಜ್ಯೋತಿಕಾಳ […]