ಹಿಜಾಬ್ ವಿವಾದ : ಮೂಗು ತೂರಿಸಿದ ‘ಪಾಪಿ’ಸ್ತಾನಕ್ಕೆ ಭಾರತ ತಿರುಗೇಟು
ನವದೆಹಲಿ, ಫೆ.12- ಕರ್ನಾಟಕದಲ್ಲಿ ಶುರುವಾಗಿ ದೇಶವನ್ನು ವ್ಯಾಪಿಸಿರುವ ಹಿಜಾಬ್ ಗದ್ದಲಕ್ಕೆ ಸಂಬಂಧ ಪಟ್ಟಂತೆ ಅನ್ಯ ದೇಶಗಳ ಅಭಿಪ್ರಾಯಗಳನ್ನು ತಳ್ಳಿ ಹಾಕಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಅನ್ಯರ ಪ್ರಚೋದನಕಾರಿ ಹೇಳಿಕೆಗಳನ್ನು ಸ್ವಾಗತಿಸುವುದಿಲ್ಲ ಎಂದಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಭಾರತವನ್ನು ಚೆನ್ನಾಗಿ ತಿಳಿದಿರುವವರು ವಾಸ್ತವತೆ ಮೇಲೆ ಸರಿಯಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಕರ್ನಾಟಕ ರಾಜ್ಯದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದ ವಿಷಯವು ಕರ್ನಾಟಕ ಹೈಕೋರ್ಟ್‍ನ ವಿಚಾರಣೆಯಲ್ಲಿದೆ. ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು […]