ಗೆಳೆಯನೊಂದಿಗೆ ಸಪ್ತಪದಿ ತುಳಿದ ನಟಿ ಮೌನಿರಾಯ್

ಗೋವಾ, ಜ. 27- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ನಟಿ ಮೌನಿರಾಯ್ ಅವರು ಇಂದು ತಮ್ಮ ದೀರ್ಘ ಕಾಲದ ಗೆಳೆಯ ಸೂರಜ್ ನಂಬಿಯಾರ್‍ರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಮೌನಿರಾಯ್ ಹಾಗೂ ಸೂರಜ್ ವಿವಾಹದಲ್ಲಿ 2 ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಆಪ್ತೇಷ್ಟರು ಮಾತ್ರ ಪಾಲ್ಗೊಂಡಿದ್ದರು. ಮಲಯಾಳಂ ಸಂಪ್ರದಾಯ ದಂತೆ ಇವರ ವಿವಾಹ ಮಹೋತ್ಸವವು ನೆರವೇರಿದ್ದು ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಿರುತೆರೆಯಿಂದ ಬೆಳಕಿಗೆ ಬಂದ ಮೌನಿರಾಯ್ […]