ಹೌರಾ-ನವದೆಹಲಿ ಎಕ್ಸ್ ಪ್ರೆಸ್ ರೈಲು ಹರಿದು ಮೂವರ ದೇಹ ಛಿದ್ರ

ಧನ್‍ಬಾದ್, ಮಾ.18-ರೈಲ್ವೇ ಹಳಿ ದಾಟುತ್ತಿದ್ದ ಮೂವರು ಹೌರಾ-ನವದೆಹಲಿ ರಾಜಧಾನಿ ಎಕ್ಸ್‍ಪ್ರೆಸ್‍ಗೆ ಬಲಿಯಾಗಿರುವ ಘಟನೆ ಜಾರ್ಖಂಡ್‍ನಲ್ಲಿ ಸಂಭವಿಸಿಸದೆ. ಧನ್‍ಬಾದ್ ರೈಲ್ವೇ ವಿಭಾಗದ ನೇತಾಜಿ ಸುಭಾಸ್ ಚಂದ್ರ ಬೋಸ್ ಗೊಮೊಹ್ ರೈಲು ನಿಲ್ದಾಣದ ಸಮೀಪ ಹಳಿಗಳನ್ನು ದಾಟುತ್ತಿದ್ದಾಗ ಮೂವರು ವ್ಯಕ್ತಿಗಳ ಮೇಲೆ ರೈಲು ಹರಿದು ಈ ದುರ್ಘಟನೆ ಸಂಭವಿಸಿದೆ ಎಂದು ಆರ್‍ಪಿಎಫ್ ಇನ್ಸ್‍ಪೆಕ್ಟರ್ ವಿಜಯ್ ಶಂಕರ್ ತಿಳಿಸಿದ್ದಾರೆ. ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟುತ್ತಿದ್ದಾಗ ಹೌರಾ-ನವದೆಹಲಿ ರಾಜಧಾನಿ ಎಕ್ಸ್‍ಪ್ರೆಸ್ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮೂವರ […]