ಅಹಮಾದಾಬಾದ್ ಸರಣಿ ಸ್ಪೋಟದ ಅಪರಾಧಿಗಳಿರುವ ಭೂಪಾಲ್ ಕಾರಾಗೃಹಕ್ಕೆ ಭದ್ರತೆ ಹೆಚ್ಚಳ

ಭೂಪಾಲ್,ಫೆ.22- ಮಧ್ಯಪ್ರದೇಶ ಸರ್ಕಾರವು 2008ರ ಅಹಮಾದಾಬಾದ್ ಸರಣಿ ಸ್ಪೋಟದ ಆರು ಅಪರಾಧಿಗಳನ್ನು ಇರಿಸಿರುವ ಭೂಪಾಲ್ ಕೇಂದ್ರೀಯ ಕಾರಾಗೃಹದ ಭದ್ರತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಸೆರೆಮನೆಯ ಕಾವಲಿಗೆ ವಿಶೇಷ ಶಸ್ತ್ರ ತಡೆಯ ತಂಡವೊಂದನ್ನು ಕಳುಹಿಸಲೂ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಗೃಹಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಈ ಬಂಧಿಖಾನೆಯಲ್ಲಿ ಸೆರೆ ಇರಿಸಲಾಗಿರುವ ಆರು ಅಪರಾಧಿಗಳಲ್ಲಿ ಅಹಮದಾಬಾದ್ ಸ್ಪೋಟದ ಪ್ರಮುಖ ಸಂಚುಕೋರ ಸಫ್ದರ್ ನಾಗೋರಿ ಕೂಡ ಸೇರಿದ್ದಾನೆ. ಗುಜರಾತ್‍ನ ನ್ಯಾಯಾಲಯವು ಅಹಮಾದಾಬಾದ್ ಸರಣಿ ಸ್ಪೋಟಕ್ಕೆ ಸಂಬಂಧಿಸಿದಂತೆ 38 […]