ಸಚಿವರ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ, ಸಂಸದ ಉಮೇಶ್ ಜಾದವ್‌ಗೆ ಗಾಯ

ಕಲಬುರಗಿ, ಜ.13- ಕೃಷಿ ಸಚಿವರ ಕಾರಿಗೆ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರ ಜತೆ ಪ್ರಯಾಣಿಸುತ್ತಿದ್ದ ಸಂಸದ ಉಮೇಶ್ ಜಾದವ್ ಅವರ ಎಡಗೈ ಮೂಳೆಗೆ ಪೆಟ್ಟಾಗಿದೆ. ಕಲಬುರಗಿಯ ರಾಮಮಂದಿರ ಸರ್ಕಲ್ ಬಳಿ ಈ ಘಟನೆ ಸಂಭವಿಸಿದ್ದು, ಸಂಸದರ ಎಡಗೈ ಮೂಳೆಗೆ ಪೆಟ್ಟು ಬಿದ್ದಿದ್ದು, ಅಪಾಯದಿಂದ ಅವರು ಪಾರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಕಲಬುರಗಿ ಸಂಸದರಾದ ಡಾ.ಉಮೇಶ್ ಜಾದವ್ ಅವರು ಕೃಷಿ ಸಚಿವರೊಂದಿಗೆ ಪ್ರಯಾಣಿಸುತ್ತಿದ್ದಾಗ ಸಚಿವರ ಕಾರು ಬೆಂಗಾವಲು ಪಡೆ ವಾಹನಕ್ಕೆ ಗುದ್ದಿದ್ದರಿಂದ […]