ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಫೆ.12ರಿಂದ ಸಾರ್ವಜನಿಕರಿಗೆ ಮುಕ್ತ
ನವದೆಹಲಿ,ಫೆ.11- ರಾಷ್ಟ್ರಪತಿ ಭವನದ ಹಿತ್ತಲಿನಲ್ಲಿರುವ ವಿಸ್ತಾರವಾದ ಮೊಘಲ್ ಗಾರ್ಡನ್ಸ್ ಅಪರೂಪದ ವೈವಿಧ್ಯಮಯ ವರ್ಣರಂಜಿತ ಹೂವುಗಳಿಂದ ಅರಳಿ ಕಂಗೊಳಿಸುತ್ತಿದೆ. ಇದೇ 12 ರಿಂದ ಮಾರ್ಚ್ 16 ರವರೆಗೆ ಸಾರ್ವಜನಿಕರಿಗೆ ತೆರೆದಿಡಲಾಗಿದ್ದು, ಮುಂಗಡ ಆನ್‍ಲೈನ್ ಬುಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನ ನೋಡಲು ಅವಕಾಶ ನೀಡಲಾಗಿದೆ. ಈ ವರ್ಷದ ಉದ್ಯಾನೋತ್ಸವದಲ್ಲಿ ಬಿಳಿ, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಲಿದೆ. ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟಿಯೆನ್ಸ್ ವಿನ್ಯಾಸಗೊಳಿಸಿದ ಈ ಉದ್ಯಾನಗಳು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ […]