ಬರೋಬ್ಬರಿ 350 ಕೋಟಿ ಮೌಲ್ಯದ ಹೆರಾಯಿನ್ ವಶ..!

ಅಹಮದಾಬಾದ್,ಜು.12- ಗುಜರಾತ್‍ನ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ನನ್ನು ಜಪ್ತಿಮಾಡಿದೆ. ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿರುವ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಭಾರೀ ಪ್ರಮಾಣದ ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಶೋಧ ಕಾರ್ಯವನ್ನು ಮುಂದುವರೆಸಿದೆ. ಹೀಗಾಗಿ ಜಪ್ತಿ ಮಾಡಲಾದ ಮಾದಕ ವಸ್ತುವಿನ ಪ್ರಮಾಣ ಮತ್ತು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೇರೆ ದೇಶದಿಂದ ಆಗಮಿಸಿದ ಕಂಟೈನರ್‍ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ […]