ಸೆಹ್ವಾಗ್ ಸಿಕ್ಕ ಬೆಂಬಲ ನನಗೆ ಸಿಗಲಿಲ್ಲ: ಮುರುಳಿ ವಿಜಯ್ ಅಸಮಾಧಾನ

ನವದೆಹಲಿ,ಜ.17- ವಿರೇಂದ್ರ ಸೆಹ್ವಾಗ್ ಅವರಿಗೆ ದೊರೆತ ಬೆಂಬಲ ನನಗೆ ದೊರೆಯಲಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಮುರುಳಿ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದರ ಡಬ್ಲ್ಯು ವಿ ರಾಮನ್ ಜೊತೆಗಿನ ಚಿಟ್‍ಚಾಟ್‍ನಲ್ಲಿ ಮುರುಳಿ ವಿಜಯ್ ಈ ಅಸಮಾಧಾನ ಹೊರ ಹಾಕಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‍ಮೆಂಟ್ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಕಿಡಿ ಕಾರಿದ್ದಾರೆ. 2018ರಲ್ಲಿ ಭಾರತ ತಂಡದ ಪರ ಕೊನೆಯ ಪಂದ್ಯವಾಡಿದ ಮುರುಳಿ ವಿಜಯ್ ಅವರು ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಸಾಕಷ್ಟು […]