ಸಂಗೀತ ಸಂಬಂಧಿತ ಸ್ಟಾರ್ಟ ಅಪ್‍ಗಳ ಸ್ಥಾಪನೆಗೆ ಪ್ರಧಾನಿ ಮೋದಿ ಕರೆ
ನವದೆಹಲಿ,ಜ.28- ದೇಶದ ಜನತೆ ಭಾರತೀಯ ಸಂಗೀತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಬೇಕು ಮತ್ತು ಸಂಗೀತ ಆಧರಿತ ಸ್ಟಾರ್ಟ್ ಆಪ್‍ಗಳನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನವನ್ನು ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಗಾಯಕ ಪಂಡಿತ್ ಸಜ್‍ರಾಜ್ ಅವರ 92ನೇ ಜನ್ಮದಿನದಂದು ಪಂಡಿತ್ ಜಸ್‍ರಾಜ್ ಸಾಂಸ್ಕøತಿಕ ಪ್ರತಿಷ್ಠಾನದ ಆನ್‍ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಜಾಗತಿಕವಾಗಿ ಸಂಗೀತ ಪ್ರಪಂಚದಲ್ಲಿ ತಂತ್ರಜ್ಞಾನ ಪ್ರವೇಶಿಸಿದೆ ಎಂದು ನುಡಿದರು.