ಓಮಿಕ್ರಾನ್‍ನಿಂದ 650 ಉಪತಳಿಗಳ ರೂಪಾಂತರ

ನವದೆಹಲಿ,ಜ.12- ಕೊರೊನಾ ರೂಪಾಂತರಿ ಓಮಿಕ್ರಾನ್‍ನಿಂದ 650 ಉಪತಳಿಗಳು ಹೊರ ಹೊಮ್ಮಿದ್ದು, ಅವುಗಳಲ್ಲಿ 200 ತಳಿಗಳು ದಕ್ಷಿಣ ಆಫ್ರಿಕಾದಲ್ಲೇ ಪತ್ತೆಯಾಗಿವೆ. ಕೋವಿಡ್ ಸೋಂಕು ಕಾಡುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಬಿಎ.1, ಬಿಎ.2 ಉಪಗಳಿಗಳು 2021ರ ನವೆಂಬರ್‍ನಿಂದ 2022ರ ಮಾರ್ಚ್ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದವು. ಬಿಎ.4 ಮತ್ತು ಬಿಎ.5 ಉಪತಳಿಗಳು 2022ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದು ವರ್ಷ ಪೂರ್ತಿ ಜನರನ್ನು ಕಾಡಿದ್ದವು. ಈ ವರ್ಷದ ಜನವರಿ 9ರವರೆಗೆ ಒಟ್ಟು 650 ಉಪತಳಿಗಳು ಬೆಳಕಿಗೆ ಬಂದಿವೆ. ಕೊರೊನಾ ತವರೂರು ಚೀನಾವನ್ನು ಕಂಗೇಡಿಸಿದ್ದ […]