ಪಂಚರಾಜ್ಯಗಳ ಚುನಾವಣೆಗೆ ಮೈಸೂರಿನ ಮೈಲ್ಯಾಕ್ ಶಾಯಿ

ಮೈಸೂರು ,ಜ.17- ಪಂಚರಾಜ್ಯಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗದ ಬೇಡಿಕೆಯಂತೆ ಮೈಸೂರಿನ ಪ್ರತಿಷ್ಠಿತ ಮೈಲ್ಯಾಕ್ ಸಂಸ್ಥೆಯಿಂದ 5 ಲಕ್ಷ ಅಳಿಸಲಾಗದ ಶಾಯಿ ಬಾಟಲ್ ಕಳುಹಿಸಲಾಗುತ್ತಿದೆ. ಈ ಶಾಯಿಯು ಫೆ.10ರಿಂದ ಮಾ.10ರವರೆಗೆ ಉತ್ತರಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಳಸಲ್ಪಡಲಿದೆ. ಚುನಾವಣಾ ಆಯೋಗದ ಬೇಡಿಕೆಯಂತೆ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಅಲ್ಲಿಗೆ ಅಗತ್ಯವಿರುವ ಅಳಿಸಲಾಗದ ಶಾಯಿಯನ್ನು ಕಳುಹಿಸಲಾಗುತ್ತದೆ. 2021ರ ನವೆಂಬರ್‍ನಲ್ಲಿ ಉತ್ತರಪ್ರದೇಶದಿಂದ 10 ಸಿಸಿಯ 4 ಲಕ್ಷ ಬಾಟಲ್, ಪಂಜಾಬ್ ಗೆ […]