ಮೈಸೂರು-ಗೋವಾ ನಡುವೆ ವಿಮಾನ ಸೇವೆ

ಮೈಸೂರು, ಜ.1- ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು-ಗೋವಾ ನಡುವೆ ಶೀಘ್ರ ಮತ್ತೊಂದು ಹೆಚ್ಚುವರಿ ವಿಮಾನ ಸೇವೆ ಆರಂಭವಾಗಲಿದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮೈಸೂರು ಗೋವಾ ನಡುವೆ ನಿತ್ಯ ಹಾರಾಟ ನಡೆಸುತ್ತಿರುವ ಏರ್ ಅಲಯನ್ಸ್ ವಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ಇದ್ದು, 65ರಿಂದ 70 ಮಂದಿ ಪ್ರಯಾಣಿಸುತ್ತಿದ್ದಾರೆ ಎಂದಿದ್ದು, ಗೋವಾ ಫ್ಲೈಟ್‍ಗೆ ಬೇಡಿಕೆ ಹೆಚ್ಚಿರುವುದರಿಂದ ಮತ್ತೊಂದು ಟ್ರಿಪ್ ಕಲ್ಪಿಸುವಂತೆ ನಾವು ಅಲಯನ್ಸ್ ಏರ್ ಸಂಸ್ಥೆಗೆ ಮನವಿ […]