ಲಾತೂರ್ ಜನರ ನಿದ್ದೆಗೆಡಿಸಿದೆ ನಿಗೂಢ ಶಬ್ದ

ಮುಂಬೈ,ಫೆ.16- ಮಹಾರಾಷ್ಟ್ರದ ಲಾತೂರ್‍ನಲ್ಲಿ ಕೇಳಿ ಬಂದ ನಿಗೂಢ ಶಬ್ದಗಳು ಅಲ್ಲಿನ ಜನರ ನಿದ್ದೆಗೆಡಿಸಿದೆ.ನಿನ್ನೆ ಲಾತೂರ್‍ನ ವಿವೇಕಾನಂದ ಚೌಕದ ಬಳಿ ನಿಗೂಢ ಶಬ್ದ ಕೇಳಿ ಬಂದಿತ್ತು. ಆದರೆ ಆ ಶಬ್ದ ಭೂಕಂಪನದ ಮುನ್ಸೂಚನೆ ಇರಬಹುದೆ ಎಂಬ ಅನುಮಾನ ಅಲ್ಲಿನ ಜನರನ್ನು ಕಾಡಿತ್ತು. ಆದರೆ, ನಿಗೂಢ ಶಬ್ದಕ್ಕೂ ಭೂಕಂಪನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಕಾರಿಗಳು ಸ್ಪಷ್ಟನೆ ನೀಡಿದ ನಂತರ ನಿಗೂಢ ಶಬ್ದ ಎಲ್ಲಿಂದ ಬಂತು ಎನ್ನುವುದು ಇನ್ನು ನಿಗೂಢವಾಗಿಯೇ ಉಳಿದಿದೆ.1993 ರಲ್ಲಿ ಲಾತೂರ್ ಜಿಲ್ಲೆಯ ಕಿಲಾರಿ ಗ್ರಾಮ ಮತ್ತು ನೆರೆಯ […]