ಖಾಲಿ ನಿವೇಶನ ಖಾತೆ ಬದಲಾವಣೆ ಗಲಾಟೆ ಕೊಲೆಯಲ್ಲಿ ಅಂತ್ಯ

ಮೈಸೂರು, ಜ.16- ಪತಿ ಹೆಸರಿನಲ್ಲಿದ್ದ ಖಾಲಿ ನಿವೇಶನವನ್ನು ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ ತಾಲೂಕು ಬನ್ನೂರಿನ ವ್ಯಾಸರಾಜಪುರ ಗ್ರಾಮದಲ್ಲಿ ನಡೆದಿದೆ.ಚಿನ್ನಸ್ವಾಮಿ (46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಪ್ರತಾಪ್ ಗಿಲ್ಲಿಸಿದ್ದನಾಯಕ (34) ಪರಾರಿಯಾಗಿದ್ದಾನೆ. ವ್ಯಾಸರಾಜಪುರದಲ್ಲಿರುವ ಖಾಲಿ ನಿವೇಶನವೊಂದು ಮನಸಿದ್ದನಾಯಕ ಎಂಬುವರ ಹೆಸರಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಮನಸಿದ್ದನಾಯಕ ತೀರಿಕೊಂಡಿದ್ದು, ಈ ಖಾಲಿ ನಿವೇಶನವನ್ನು ಪತ್ನಿ ಚಿಕ್ಕಣ್ಣಮ್ಮ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. […]