ಅರಮನೆ ಮೈದಾನದಲ್ಲಿ ವಿಜೃಂಬಿಸಿದ ನಾರಿ ಶಕ್ತಿ

ಬೆಂಗಳೂರು,ಜ.16- ಮಹಿಳೆಯರಿಂದ ಮಹಿಳೆಯರಿಗಾಗಿಯೇ ನಡೆದ ನಾ ನಾಯಕಿ ಸಮಾವೇಶದಲ್ಲಿ ನಾರಿಯರ ದರ್ಬಾರ್ ವಿಜೃಂಭಿಸಿತ್ತು. ಪ್ರತಿ ಸಮಾವೇಶದಲ್ಲೂ ಕಾಂಗ್ರೆಸ್ ನಾಯಕರೇ ತುಂಬಿ ಹೋಗಿರುತ್ತಾರೆ. ಅಲ್ಲಿ ಮಹಿಳಾ ನಾಯಕಿಯರ ಉಪಸ್ಥಿತಿ ನಗಣ್ಯವಾಗಿರುತ್ತಿತ್ತು. ಇಂದಿನ ನಾ ನಾಯಕಿ ಸಮಾವೇಶದ ವೇದಿಕೆಯಲ್ಲಿ 42 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಬಹುತೇಕ ಮಹಿಳಾ ನಾಯಕಿಯರೇ ತುಂಬಿ ಹೋಗಿದ್ದರು. ಶಾಸಕರು, ಸಂಸದರಿಗೆ ವೇದಿಕೆ ಮುಂಭಾಗದಲ್ಲಿ ಕುರ್ಚಿಗಳನ್ನು ಹಾಕಲಾಗಿತ್ತು. ವೇದಿಕೆಯ ಮೇಲೆ ಪ್ರಿಯಾಂಕ ಗಾಂಧಿಯವರ ಜೊತೆ ಮಹಿಳಾ ಕಾಂಗ್ರೆಸ್‍ನ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರು, ಮಹಿಳಾ […]