ಪ್ರೀಯಾಂಕ ಗಾಂಧಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ‘ಕೈ’ನಾಯಕರು

ಬೆಂಗಳೂರು,ಜ.16- ನಾ ನಾಯಕಿ ಸಮಾವೇಶಕ್ಕೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಬರಮಾಡಿಕೊಂಡರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ‌.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಗಾಂಧಿ ಅವರನ್ನು ಸ್ವಾಗತಿಸಿದರು. ವಿ‌ಮಾನನಿಲ್ದಾಣದ ಹೊರಗೆ ಸಾದಹಳ್ಳಿ ಗೇಟ್ ಬಳಿ ಬೃಹತ್ ಸೇಬಿನ‌ ಹಾರ ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಕೆಲ ದೂರ ಮೆರಣಿಗೆಯಲ್ಲಿ ಪ್ರಿಯಾಂಕ ಆಗಮಿಸಿದರು. ಹಾದಿಯುದ್ಧಕ್ಕೂ ಕಾದು ನಿಂತಿದ್ದ ಅಭಿಮಾನಿಗಳಿಗೆ ಪ್ರಿಯಾಂಕ ಕೈ ಬಿಸಿ ಶುಭಾಷಯ […]