ನಬಾರ್ಡ್‍ನಿಂದ ರಾಜ್ಯಕ್ಕೆ 3.90 ಲಕ್ಷ ಕೋಟಿ ಸಾಲ ಯೋಜನೆ

ಬೆಂಗಳೂರು,ಜ.23- ಕರ್ನಾಟಕ ರಾಜ್ಯಕ್ಕೆ 3.90 ಲಕ್ಷ ಕೋಟಿ ರೂ. ಗಳನ್ನು ಆದ್ಯತಾ ವಲಯದ ಸಾಲದ ಗುರಿಯನ್ನು 2023-24ನೇ ಸಾಲಿಗೆ ನಬಾರ್ಡ್ ಯೋಜಿಸಿದೆ ಎಂದು ನಬಾರ್ಡ್‍ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಲಯಕ್ಕೆ ಶೇ.50ರಷ್ಟು ಪಾಲನ್ನು ನೀಡಲಾಗುತ್ತಿದೆ(1.79 ಲಕ್ಷ ಕೋಟಿ) ಉಳಿದಂತೆ ಎಂಎಸ್‍ಎಂಇಗಳಿಗೆ 1.35 ಲಕ್ಷ ಕೋಟಿ(38%) ಮತ್ತು ಇತರೆ ಆದ್ಯತಾ ವಲಯಕ್ಕೆ 45 ಸಾವಿರ ಕೋಟಿ ( 12%) ಸಾಲ ಯೋಜನೆಯನ್ನು ರೂಪಿಸಿದೆ ಎಂದು ಅವರು ತಿಳಿಸಿದರು. ಆಹಾರ, ರೈತರ […]