ಕುಲ ಕುಲವೆಂದು ಹೊಡೆದಾಡದಿರಿ : ಮೋದಿ ಭಾಷಣದ ಹೈಲೈಟ್ಸ್

ಬೆಂಗಳೂರು,ನ.11-ಡಬಲ್ ಇಂಜಿನ್ ಸರ್ಕಾರದಿಂದ ನವಭಾರತ ನಿರ್ಮಾಣ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಪ್ರತಿಪಾದಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣದ ಮೂಲಕ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ,ಇಂದು ರಾಜ್ಯ ಮತು ರಾಷ್ಟ್ರಕ್ಕೆ ಉತ್ತಮ ಸಂದೇಶ ನೀಡಿದ ಕನಕದಾಸರು, ಒನಕೆ ಓಬವ್ವ ಅವರ ಜನ್ಮದಿನವಾದ ಇಂದು ರಾಜ್ಯಕ್ಕೆ ಭೇಟಿ ನೀಡಿರುವುದು ಹೆಚ್ಚು ಸಂತಸ ನೀಡಿದೆ ಎಂದರು. ಕನಕದಾಸರು […]