ಕಾಶ್ಮೀರಿ ಫೈಲ್ ಚಿತ್ರದ ಟೀಕೆಗೆ ವ್ಯಾಪಕ ಖಂಡನೆ

ಮುಂಬೈ,ನ.29- ಕಾಶ್ಮೀರಿ ಫೈಲ್ಸ್ ಚಿತ್ರ ಕುರಿತು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥ ನಡ್ವ ಲಾಪಿಡ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. 53ನೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಿನ್ನೆ ನಡೆದಿತ್ತು. ಅದರಲ್ಲಿ ಮಾತನಾಡಿದ ನಡ್ವಾ, ಕಾಶ್ಮೀರಿ ಫೈಲ್ ಚಿತ್ರ ಅಪಪ್ರಚಾರ ಮತ್ತು ಅಸಹ್ಯವಾಗಿದೆ. ಇಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ನನಗೆ ಆಘಾತ ತರಿಸಿದೆ ಎಂದು ಹೇಳಿಕೆ ನೀಡಿದ್ದರು. ನಡ್ವಾ ಇಸ್ರೇಲಿನ ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ. ಚಿತ್ರೋತ್ಸವಕ್ಕೆ ಅವರನ್ನು ತೀರ್ಪುಗಾರರ ತಂಡದ […]