ಕಾಂಗ್ರೆಸ್‍ನ್ನು ಶಾಶ್ವತ ನಿದ್ರೆಗೆ ಕಳುಹಿಸಲು ಜನ ಸಜ್ಜಾಗಿದ್ದಾರೆ : ಕಟೀಲ್

ಬೆಂಗಳೂರು,ಫೆ.19- ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲೂ ಕಾಂಗ್ರೆಸ್‍ನ್ನು ಶಾಶ್ವತ ನಿದ್ರೆಗೆ ಕಳುಹಿಸಲು ನಾಗರಿಕರು ಸಜ್ಜಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜನರ ದಿಕ್ಕು ತಪ್ಪಿಸಲು ಅಹೋರಾತ್ರಿ ನಿದ್ರಾ ಧರಣಿಯ ಮೂಲಕ ಕಾಂಗ್ರೆಸ್ ಅನಗತ್ಯ ಕೆಲಸಕ್ಕೆ ಕೈ ಹಾಕಿದೆ ಎಂದು ವ್ಯಂಗ್ಯವಾಡಿದ್ದಾರೆ. ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್‍ಗೆ ಈಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಯಾವುದೇ ವಿಷಯ ಇಲ್ಲ. ಜವಾಬ್ದಾರಿಯುತ ವಿಪಕ್ಷ ಯಾವ ವಿಷಯಕ್ಕೆ […]