ಆರ್ಥಿಕ ಕೊರತೆಯಿಂದಾಗಿ ನಮ್ಮ ಕ್ಲಿನಿಕ್ ಸೇವೆ ಸ್ಥಗಿತ

ಬೆಂಗಳೂರು,ಜ.16- ರಾಜ್ಯದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆರಂಭಿಸಿದ್ದ ನಮ್ಮ ಕ್ಲಿನಿಕ್ ಸೇವೆಯನ್ನು ಆರ್ಥಿಕ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನಮ್ಮ ಕ್ಲಿನಿಕ್ ಗುರಿಯಂತೆಯೇ ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್‍ನಡಿ ಮೊಬೈಲ್ ವೈದ್ಯಕೀಯ ಘಟಕಗಳ (ಎಂಎಂಯು) ಸೇವೆಯನ್ನು 2022ರ ಆರಂಭಿಕ ತಿಂಗಳಿನಲ್ಲಿ ಆರಂಭಿಸಿತ್ತು. ಈ ಸೇವೆಗೆ ಬಜೆಟ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ. 12 ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ 70 ಎಂಎಂಯುಗಳನ್ನು ಒದಗಿಸಲು ಮುಂದಾಗಿತ್ತು. ದೂರದ ಪ್ರದೇಶಗಳಲ್ಲಿನ ತುರ್ತು ಸೇವೆಗಳನ್ನು ನೋಡಿಕೊಳ್ಳಲು ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ರಾಷ್ಟ್ರೀಯ […]
“ಡಿಸೆಂಬರ್ ಅಂತ್ಯದೊಳಗೆ 438 ನಮ್ಮ ಕ್ಲಿನಿಕ್ ಆರಂಭ”
ಬೆಂಗಳೂರು,ಸೆ.19-ಬೆಂಗಳೂರು ಸೇರಿದಂತೆ ನಗರಪ್ರದೇಶಗಳಲ್ಲಿ ಬಡವರು ಮತ್ತು ದುರ್ಬಲ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‍ಗಳನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ವಿಧಾನಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ 243 ಇತರ ಜಿಲ್ಲೆಗಳಲ್ಲಿ 195 ನಮ್ಮ ಕ್ಲಿನಿಕ್‍ಗಳನ್ನು ಒಟ್ಟು 155.77 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗುವುದು ಎಂದರು. ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ […]
ನಮ್ಮ ಕ್ಲಿನಿಕ್ ಯೋಜನೆಗೆ 103 ಕೋಟಿ ರೂ. ಮಂಜೂರು
ಬೆಂಗಳೂರು,ಸೆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನಮ್ಮ ಕ್ಲಿನಿಕ್‍ಗೆ 103 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾಂಗ್ರೆಸ್ ಟ್ವೀಟ್‍ಗಳಿಗೆ ಎದುರೇಟು ನೀಡಿರುವ ಸುಧಾಕರ್, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಣೀತ ಸುಳ್ಳುಗಳೇ ಸದ್ದು ಮಾಡುತ್ತವೆ. ಆದರೆ ಸತ್ಯದ ಸಮಾಧಿ ಮಾಡುವ ಪ್ರಯತ್ನ ಬೇಡ. ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಛಾಟಿ ಬೀಸಿದ್ದಾರೆ. ಅಲ್ಪ ವಿದ್ಯಾ ಮಹಾಗರ್ವಿ ಎಂಬ ಮಾತು ಕಾಂಗ್ರೆಸ್‍ಗೆ ಹೇಳಿ ಮಾಡಿಸಿದಂತಿದೆ. ಸತ್ಯ […]