ಹೊಸ ವರ್ಷಾಚರಣೆ: ನಂದಿಬೆಟ್ಟಕ್ಕೆ ಹರಿದುಬಂದ ಜನಸಾಗರ

ಚಿಕ್ಕಬಳ್ಳಾಪುರ, ಜ.1- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ವರ್ಷದ ಆರಂಭದ ದಿನ ಹಾಗೂ ಭಾನುವಾರವಾಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಂದಿಬೆಟ್ಟಕ್ಕೆ ಜನ ಮರಳೋ ಜಾತ್ರೆ ಮರಳೋ ಎಂಬಂತೆ ತಂಡೋಪತಂಡವಾಗಿ ಆಗಮಿಸಿದ್ದರು. ನಂದಿ ಬೆಟ್ಟದಲ್ಲಿ ರಾತ್ರಿಯ ಸಂಭ್ರಮಾಚರಣೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾ ಆಡಳಿತ ನಿಷೇಧ ಹೇರಿದ್ದು, ಇಂದು ಬೆಳಿಗ್ಗೆ 6 ಗಂಟೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ನಂದಿಬೆಟ್ಟಕ್ಕೆ ಆಗಮಿಸಲು ಕಾದು ಕುಳಿತಿದ್ದವರು […]