ಕ್ಯಾಶ್ ಕೌಂಟರ್ ಇಲ್ಲದ ನಾರಾಯಣ ದೇವಾಲಯ ಉಚಿತ ನೇತ್ರಾ ಚಿಕಿತ್ಸಾ ಕೇಂದ್ರ

ತುಮಕೂರು,ಡಿ.7- ಹೃದಯದ ನಂತರ ಪ್ರಮುಖ ಅಂಗ ಕಣ್ಣಿನ ಚಿಕಿತ್ಸಾ ಕೇಂದ್ರ ರಾಜ್ಯಾದ್ಯಂತ ಪ್ರಾರಂಭಿಸಲು ನಾರಾಯಣ ನೇತ್ರಾಲಯ ಮುಂದಾಗಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದಲ್ಲಿ ನಾರಾಯಣ ನೇತ್ರಾಲಯದ ನಾರಾಯಣ ದೇವಾಲಯ ಉಚಿತ ನೇತ್ರಾ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 25 ವರ್ಷಗಳಿಂತಲೂ ಹೆಚ್ಚು ಕಾಲ ಕಣ್ಣಿನ ರೋಗಗಳ ನಿವಾರಣೆಗೆ ಡಾ.ಭುಜಂಗಶೆಟ್ಟರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದರು. ನೇತ್ರದಾನ ಅಭಿಯಾನ ಪ್ರಾರಂಭಿಸಿ ಡಾ.ರಾಜ್‍ಕುಮಾರ್ ಅವರಿಂದ ಪುನೀತ್ ರಾಜ್ ಕುಮಾರ್ ರವರಿಗೆ ನೇತ್ರಾದಾನಕ್ಕೆ ಪ್ರೇರಣೆಯಾಗಿದ್ದು, ಡಾ.ಭುಜಂಗಶೆಟ್ಟರು, […]