ಬಿಜೆಪಿ ರಾಷ್ಟ್ರೀಯ ನಾಯಕರ ಮೊರೆ ಹೋಗಿರುವುದೇಕೆ : ಸಿದ್ದರಾಮಯ್ಯ ಪ್ರಶ್ನೆ

ಕಲಬುರಗಿ,ಜ.28- ಭಷ್ಟಚಾರ ಮಾಡಿ, ಜನ ವಿರೋಧಿ ಆಡಳಿತ ನಡೆಸಿರುವ ಬಿಜೆಪಿಗೆ ವಿಧಾನಸಭೆ ಚುನಾವಣೆ ಹೆದರಿಸಲು ಭಯವಾಗಿ, ಪದೇ ಪದೇ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಕರೆಸಿ ಪ್ರಚಾರ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಮಾವೇಶಗಳನ್ನು ನೋಡಿ ಕಾಂಗ್ರೆಸ್‍ಗೆ ಯಾವ ಭಯಗಳು ಇಲ್ಲ. ಭಯ ಶುರುವಾಗಿರುವುದು ಬಿಜೆಪಿಯವರಿಗೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ವಾರಕ್ಕೊಮ್ಮೆ ಕರೆಸುತ್ತಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾರನ್ನು ಪದೇ ಪದೇ ಕರೆಸುತ್ತಿದ್ದಾರೆ. ನಿಜವಾಗಲು ಅವರಿಗೆ ಭಯ […]