“ಗುಂಡೇಟಿನಿಂದ ಸಾಯದಿದ್ದರೂ ಊಟ ಇಲ್ಲದೆ ಸಾಯೋದಂತೂ ಗ್ಯಾರಂಟಿ”

ಬೆಂಗಳೂರು, ಮಾ.2- ಇಲ್ಲ ಸಾರ್ ನಾವು ಜೀವಂತವಾಗಿ ಹಿಂತಿರುಗುತ್ತೇವೆ ಎಂಬ ಆಸೆಯನ್ನೇ ಬಿಟ್ಟಿದ್ದೇವೆ. ಯಾವ ಸಂದರ್ಭದಲ್ಲಾದರೂ ನಮ್ಮ ಮೇಲೆ ಶೆಲ್ ದಾಳಿ ನಡೆಯಬಹುದು. ಒಂದು ವೇಳೆ ನಾವು ಗುಂಡೇಟಿನಿಂದ ಸಾಯದಿದ್ದರೂ ಹೊಟ್ಟೆಗೆ ಊಟ ಇಲ್ಲದೆ ಸಾಯೋದಂತೂ ಗ್ಯಾರಂಟಿ. ಇದು ನಿನ್ನೆಯಷ್ಟೆ ಉಕ್ರೇನ್‍ನಲ್ಲಿ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸ್ನೇಹಿತ ಶ್ರೀಕಾಂತ್ ಅವರ ಆಕ್ರಂದನ. ಬೆಂಗಳೂರಿನ ಬಿಎಂಟಿಸಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಹರೀಶ್ ಅವರ ಸಹೋದರರಾಗಿರುವ ಶ್ರೀಕಾಂತ್ ದೂರದ ಉಕ್ರೇನ್‍ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ. ಉಕ್ರೇನಿನ ಬಂಕರ್‍ನಲ್ಲಿ ಜೀವ ಕೈಯಲ್ಲಿಡಿದುಕೊಂಡು […]