5 ಲಕ್ಷ ಬಹುಮಾನ ಘೋಷಿತವಾಗಿದ್ದ ನಕ್ಸಲ್ ಲಖ್ಮಾ ಸೋದಿ ಎನಕೌಂಟರ್ ಗೆ ಬಲಿ
ದಂತೇವಾಡ,ಫೆ.20- ಹಲವಾರು ಹಿಂಸಾಚಾರ ಘಟನೆಗಳಲ್ಲಿ ಭಾಗಿಯಾಗಿ ರುವ ಆರೋಪ ಹೊತ್ತು ಆತನ ತಲೆಗೆ ಐದು ಲಕ್ಷ ರೂ. ಬಹುಮಾನ ಘೋಷಿತವಾಗಿದ್ದ ನಕ್ಸಲೀಯನೊಬ್ಬ ಛತ್ತೀಸ್‍ಗಢದ ದಂತೇವಾಡ ಜಿಲ್ಲೆಯಲ್ಲಿ ಪೊಲೀಸರ ಎನ್‍ಕೌಂಟರ್‍ನಲ್ಲಿ ಹತನಾಗಿದ್ದಾನೆ. ಜಿಲ್ಲೆಯ ಅರ್ನಾಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಬುರ್‍ಗುಮ್ ಗ್ರಾಮದಲ್ಲಿನ ಅರಣ್ಯವೊಂದರ ಸಮೀಪ ನಕ್ಸಲರೊಂದಿಗೆ ನಿನ್ನೆ ಮಧ್ಯರಾತ್ರಿ ಗುಂಡಿನ ಕಾಳಗ ನಡೆಯಿತು. ಜಿಲ್ಲಾ ಮೀಸಲು ಕಾವಲು ಪಡೆ ನಕ್ಸಲ್ ವಿರೋ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಗುಂಡಿನ ಚಕಮಕಿ ನಡೆದಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಕಾರಿ ಸಿದ್ದಾರ್ಥ ತಿವಾರಿ […]